ನಾನು ದಿಲೀಪನನ್ನು ನೋಡಿ ತುಂಬಾ ವರ್ಷಗಳೇ ಆಗಿದ್ದವು. ನಾನು, ಜೀಪಿ, ಐಪಿ, ಮಧು, ದಿಲೀಪ ಒಮ್ಮೆ ಲಾಲ್-ಬಾಗ್ ನಲ್ಲಿ ಸಿಕ್ಕಿದ್ದೆವು. ಅದಾದ ನಂತರ ದಿಲೀಪನನ್ನು ನಾನು ನೋಡಿರಲಿಲ್ಲ. ಐಪಿ ಮದುವೆಯಲ್ಲಿ ಆತನನ್ನು ನೋಡಿದೆ. ಜೊತೆಗೆ ನನ್ನ ಹಳೆಯ ಮಿತ್ರ ನಾಗೇಂದ್ರ ಸಿಕ್ಕಿದ. ನಾನು ಪ್ರಶಾಂತನ ಮದುವೆಗೆ ಬಂದೇ ಬರುತ್ತೇನೆ ಅಂತ ಅವನಿಗೆ ಗೊತ್ತಿತ್ತು. ಅವನು ಬಂದು, ನನ್ನನ್ನು ಮನೆಗೆ ಕರೆದುಕೊಂದು ಹೋದ. ಅವತ್ತು ರಾತ್ರಿ ಅವನ ಮನೆಯಲ್ಲೇ ಇದ್ದು, ಬೆಳಿಗ್ಗೆ ಗುರು ಮನೆಗೆ ಹೋದೆ. ಗುರು ಮಗನನ್ನು ನಾನು ನೋಡಿರಲಿಲ್ಲ. ಅವರ ಮನೆಯವರನ್ನು ನೋಡಿ ಒಂದು ವರ್ಷ ಆಗಿತ್ತು...
No comments:
Post a Comment
Note: Only a member of this blog may post a comment.