Tuesday, February 23, 2010

ಮತ್ತೆ ಹಾಡಿತು ಕೋಗಿಲೆ

ಇತ್ತೀಚೆಗಷ್ಟೇ ಶಿವರಾತ್ರಿ ಮುಗಿಯಿತು. ಫಾಲ್ಗುಣ ಮಾಸ ಮುಗಿಯಲು ಇನ್ನೂ ಸುಮಾರು ಇಪ್ಪತ್ತು ದಿನಗಳು ಇವೆ.
ಆಗಲೇ ಹೈದರಾಬಾದಿನಲ್ಲಿ ವಸಂತ ಮಾಸದ  ಕಳೆ ತುಂಬಿಕೊಳ್ಳುತ್ತಾ ಇದೆ. ಎರಡು ದಿನಗಳಿಂದ ಒಳ್ಳೆಯ ಮಳೆ ಆಗಿದೆ. ಹೋದವಾರ, ಮಧ್ಯಾಹ್ನದ ಹೊತ್ತು ಹೊರಕ್ಕೆ ಹೋಗೋಕ್ಕೆ ಬೇಜಾರಾಗುತ್ತಿತ್ತು. ಇವತ್ತು ವಾತಾವರಣ ಆಹ್ಲಾದಕರವಾಗಿದೆ.

ಸಾಮಾನ್ಯವಾಗಿ ಯುಗಾದಿ ಹೊತ್ತಿಗೆ ಮಳೆ ಆಗೋದು ವಾಡಿಕೆ. ಆದರೆ, ಕಳೆದ ಒಂದು ವರ್ಷದಿಂದ ಎಲ್ಲಾ ಹಬ್ಬಗಳು ಒಂದೊಂದು ತಿಂಗಳು ಮುಂಚೆನೇ ಬರುತ್ತಾ ಇವೆ. ಚಾಂದ್ರಮಾನ ಪಂಚಾಗದ ಲೆಕ್ಕಾಚಾರಗಳು ಹೀಗೆ ಯಡವಟ್ಟು ಮಾಡಿಕೊಳ್ಳುತ್ತ ಅನೇಕ ಶತಕಗಳೇ ಉರುಳಿವೆ. ಆದರೂ ಇದರ ಬಗ್ಗೆ ಗಂಭೀರವಾಗಿ ಯಾರೂ ತಲೆಕೆಡಿಸಿಕೊಂಡಿಲ್ಲ. ಹೀಗೆ ಲೆಕ್ಕಾಚಾರ  30 ದಿನ ಆಗುತ್ತಿದ್ದ ಹಾಗೆ, ಒಂದು ಅಧಿಕ ಮಾಸ ತೂರಿಸಿ ಕೈ ತೊಳೆದು ಕೊಂಡುಬಿಡ್ತಾರೆ.

ಬೇಸಿಗೆಗೆ ಬರುತ್ತಿದ್ದ ಯುಗಾದಿ ಒಂದು ತಿಂಗಳು ಮುಂಚೆನೇ ಬರುತ್ತಾ ಇದೆ. ಆದರೂ, ಗಿಡ-ಮರಗಳಲ್ಲಿ ಚಿಗುರು ಕಾಣಿಸಿಕೊಳ್ಳುತ್ತಿದೆ. ನಿಧಾನವಾಗಿ ಚಳಿ ಕಡಿಮೆ ಆಗುತ್ತಿದೆ. ನಾನು ಬೇಗ ಏಳಲು ಪ್ರಾರಂಭಿಸಿದ್ದೇನೆ. ಎದ್ದು "Walk-ಸ್ವಾತಂತ್ರ್ಯ" ! ಹೊಸ ಯುಗಾದಿ ಬಂದರೂ, ಬೇಂದ್ರೆಯವರ ಹಳೇ ಪದ್ಯದ ಪಾದವೇ ಗತಿ!  ಹೋದ ವಾರ, ಯಾಕೋ ವಿಷ್ಣುವರ್ಧನ್ ಹಾಡು ನೆನಪಾಯಿತು.

"ನವ ವಸಂತದ ಗಾಳಿ ಬೀಸಲು, ಮಾವು ಚಿಗುರಿತು ಆಗಲೇ,
ಮೌನ ಮರೆಯುತ, ಮಧುರ ಗೀತೆಯ ಮತ್ತೆ ಹಾಡಿತು ಕೋಗಿಲೆ"

ಮತ್ತೆ ಹಾಡಿತು ಸಿನಿಮಾ ನೋಡಿ ಸುಮಾರು 15 ವರ್ಷಗಳೇ ಕಳೆದಿವೆ. ಈ ಹಾಡಿಗೆ ಅಭಿನಯಿಸಿದ  ಬೇಬಿ ಶ್ಯಾಮಿಲಿ ಈಗ ಹೀರೋಯಿನ್ನು. ವಿಷ್ಣುವರ್ಧನ್ ಇಹಲೋಕವನ್ನು ತ್ಯಜಿಸಿಯಾಗಿದೆ. 

ಕಾಲಚಕ್ರ ಎಷ್ಟು ಬೇಗ ತಿರುಗುತ್ತಲ್ವಾ ಅಂತ ಅನಿಸುತ್ತಿದೆ.
 
ನಾನಂತೂ ಕೋಗಿಲೆ ಧ್ವನಿ ಕೇಳಲು ಕಾತರಗೊಂಡಿದ್ದೇನೆ

No comments:

Post a Comment

Note: Only a member of this blog may post a comment.